ಬಡಪಾಯಿ ಮನಸಿಗೆ ಭಾವನೆಗಳೇ ಆಸ್ತಿ

ಹನಿಗವನ


ಕೂಗಿ ಹೇಳಬೇಕೆನಿಸಿದೆ ನೀನೇನೆ ನನ್ನವಳು
ಹೀಗೆನಿಸಲು ಇವೆ, ಕಾರಣಗಳು ಹಲವು
ಮೊದಲ ನೋಟದಿ ಮನವು ಹೇಳಿತು, ಸಂಪ್ರದಾಯ ಶಾರದೆ
ಕನಸಿನ ಕನ್ಯೆಯ ಕಂಡು ಗಾಳಿಯಲ್ಲಿ ತೇಲಿದೆ…