ಅಪರಾಹ್ನ ಹುಣ್ಣಿಮೆ ಕಂಡವನಿಗೆ

ಹನಿಗವನ


ಕಲ್ಪನೆಯ ಬಾಂದಳಕೆ ಬಾರೆ ಗೆಳತಿ
ಮಾತನಾಡುವ…

ಹೆಜ್ಜೆಗೊಂದು ಹೆಜ್ಜೆ ಕೂಡಿ
ಮಾತು ಹರಟುವ…

ಹಕ್ಕಿ ಹಾಡೋ ಸದ್ದು ಕೇಳಿ
ನಾವೂ ಹಾಡುವ…

ತಂಗಾಳಿಯ ಸ್ಪರ್ಶದಿ ಮಿಂದು
ಕಾಲ ಕಳೆಯುವ…

ನಿನ್ನ ಚೆಲುವ ಕೆನ್ನೆ ಮೇಲೊಂದು
ಚಿತ್ರ ಬಿಡಿಸುವೆ!

ಎಂದೂ ಮಾಸದ ಬಂಧನವ
ಮನದಿ ಬೆಸೆಯುವೆ!!